ಸಾಗುವ ದಾರಿಯಲ್ಲಿ ಚಿತ್ರದಲ್ಲಿ ಸಾಮಾನ್ಯನ ಪಾತ್ರದಲ್ಲಿ ಅನೂಪ್ ಸಾರಾ ಗೋವಿಂದ್
TV5 Kannada18 April 2018 7:49 AM GMT
ನಟ ಅನೂಪ್ ಸಾರಾ ಗೋವಿಂದ್ ಅಭಿನಯದ ಸಾಗುವ ದಾರಿಯಲ್ಲಿ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದ್ದು ಚಿತ್ರದಲ್ಲಿ ಅನೂಪ್ ಸಾಮಾನ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಕೀಲಿ ವೃತ್ತಿಯಿಂದ ನಿರ್ದೇಶನಕ್ಕೆ ಮರಳಿದ ಶಿವಕುಮಾರ್ ಸಿಎಸ್ ಗೌಡ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅನೂಪ್ ಅವರು ಡವ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಮಿ. ಪರ್ಫೆಟ್ ಚಿತ್ರದಲ್ಲಿ ನಟಿಸಿದ್ದರು.
ಸಾಗುವ ದಾರಿಯಲ್ಲಿ ಚಿತ್ರ ಇದು ನನ್ನ ಮೂರನೇ ಚಿತ್ರವಾಗಿದೆ. ನಿರ್ದೇಶಕ ಶಿವಕುಮಾರ್ ಅವರು ನೈಜ್ಯ ಘಟನೆಯನ್ನಾಧರಿಸಿದ ಕಥೆಯನ್ನು ವಿವರಿಸಿದರು. ಅವರ ವಿವರಣಾ ಶೈಲಿ ನನಗೆ ಇಷ್ಟವಾಗಿ ಈ ಚಿತ್ರದಲ್ಲಿ ಅಭಿನಯಿಸಲು ಮುಂದಾದೆ ಎಂದು ಅನೂಪ್ ಹೇಳಿದ್ದಾರೆ.
ಈ ಚಿತ್ರ ನೈಜ್ಯ ಘಟನೆಯನ್ನಾಧರಿಸಿದ್ದರಿಂದ ಇದು ಪ್ರತಿಯೊಬ್ಬ ಸಾಮಾನ್ಯನ ಜೀವನದಲ್ಲಿ ನಡೆದಿರುತ್ತದೆ. ಈ ಕಥೆಯನ್ನು ನಿರ್ದೇಶಕರು ಉತ್ತಮವಾಗಿ ಚಿತ್ರಕಥೆಯನ್ನು ಬರೆದಿದ್ದಾರೆ. ಇನ್ನು ಚಿತ್ರದ ಕುರತಂತೆ ಮತ್ತೊಂದು ಸಂಗತಿಯನ್ನು ನಟ ಅನೂಪ್ ಹೇಳಿಕೊಂಡಿದ್ದಾರೆ. ನಾಲ್ಕು ಪ್ರಮುಖ ವ್ಯಕ್ತಿಗಳ ನಡುವೆ ಚಿತ್ರ ನಡೆಯುತ್ತದೆ. ಪೊಲೀಸ್, ವಕೀಲ, ಶ್ರೀಮಂತ ಹಾಗೂ ಸಾಮಾನ್ಯ ಪ್ರಜೆ ಈ ನಾಲ್ವರು ತಮ್ಮ ಬದುಕಿಗಾಗಿ ನಡೆಸುವ ಹೋರಾಟದ ಸಂಘರ್ಷದ ಕಥೆಯಾಗಿದೆ ಎಂದರು.
ಚಿತ್ರದಲ್ಲಿ ಹಿರಿಯ ನಟ ದೇವರಾಜ್, ಶರತ್ ಲೋಹಿತಾಶ್ವ, ಸತ್ಯಜಿತ್, ರಂಗಾಯಣ ರಘು, ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
Next Story