Top

ರ್ಯಾಂಬೊ2ನಲ್ಲಿ 'ಧಮ್ ಮಾರೊ ಧಮ್' ಎಂದ ಐಂದ್ರಿತಾ

ಸ್ಯಾಂಡಲ್ವುಡ್ ನಟ ಶರಣ್ ಅಭಿನಯದ ರ್ಯಾಂಬೋ 2 ಚಿತ್ರ ಸಾಕಷ್ಟು ಕುತೂಹಲಗಳಿಗೆ ಸುದ್ದಿಯಾಗಿದೆ. ಚಿತ್ರದ ಹಾಡೊಂದರಲ್ಲಿ ಕನ್ನಡದ ನಟಿಯರಾದ ಶ್ರುತಿ ಹರಿಹರನ್, ಶುಭಾ ಪೂಂಜ, ಸಂಚಿತಾ ಪಡುಕೋಣೆ, ಭಾವನಾ ರಾವ್ ಮತ್ತು ಮಯೂರಿ ಹೆಜ್ಜೆ ಹಾಕಿದ್ದರು ಎಂದು ಹೇಳಲಾಗಿತ್ತು.

ಇದೀಗ ಸ್ಯಾಂಡಲ್ವುಡ್ ನ ನಟಿ ಐಂದ್ರಿತಾ ರೈ ರ್ಯಾಂಬೋ 2 ಚಿತ್ರದ ಧಮ್ ಮಾರೋ ಧಮ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ, ಈ ಹಾಡನ್ನು ಹಾಡಿರುವುದು ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ. ಅದಿತಿ ಈ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪರಿಚಿತರಾಗಿದ್ದರು. ಅರ್ಜುನ್ ಜನ್ಯ ಸಂಗೀತ ನೀಡಿರುವ ಧಮ್ ಮಾರೋ ಧಮ್ ಹಾಡು ಸಾಕಷ್ಟು ವೈರಲ್ ಆಗಿದೆ.

ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ರ್ಯಾಂಬೋ 2 ಚಿತ್ರವನ್ನು ಶರಣ್ ತಮ್ಮ ಲಡ್ಡು ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಶರಣ್ ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಏಪ್ರಿಲ್ ಕೊನೆಯ ವಾರ ಅಥವಾ ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Next Story

RELATED STORIES