Top

'ಪಾಲಿಟಿಕ್ಸ್ ಪಕ್ಕಕ್ಕಿಟ್ಟು ಮತ್ತೆ ಚಿತ್ರ ನಟನೆಗಿಳಿದ ರಿಯಲ್ ಸ್ಟಾರ್ ಉಪ್ಪಿ'

ಪಾಲಿಟಿಕ್ಸ್ ಪಕ್ಕಕ್ಕಿಟ್ಟು ಮತ್ತೆ ಚಿತ್ರ ನಟನೆಗಿಳಿದ ರಿಯಲ್ ಸ್ಟಾರ್ ಉಪ್ಪಿ
X

ಬೆಂಗಳೂರು: ಬೆಳ್ಳಿ ಪರದೆಯ ಮೇಲೆ ಅಪಾರ ಯಶಸ್ಸು ಪಡೆದು ನಂತರ ರಾಜ್ಯ ರಾಜಕಾರಣಕ್ಕಿಳಿದಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಸಹ ಸಂಸ್ಥಾಪಕ ನಟ ಉಪೇಂದ್ರ ತಾತ್ಕಾಲಿಕವಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಮತ್ತೆ ನಟನೆಗೆ ವಾಪಾಸಾಗಿದ್ದಾರೆ.

ಮತ್ತೆ ಸಿನಿಮಾಗಳ ಕಡೆ ಗಮನ ಹರಿಸಿರುವ ಉಪೇಂದ್ರತಮ್ಮ ಹೊಸ ಪ್ರಾಜೆಕ್ಟ್ ಕೆಲಸವನ್ನು ಇಂದಿನಿಂದ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕೀಯದಲ್ಲಿ ಮುಂದುವರಿಯುವ ಇರಾದೆ ಹೊಂದಿರುವ ಉಪ್ಪಿ ಸದ್ಯ ತಾವು ಸದಾ ಪ್ರೀತಿಸುವ ಸಿನಿಮಾ ಕಡೆ ತಮ್ಮ ಗಮನ ಪೋಕಸ್ ಮಾಡಲಿದ್ದಾರೆ.

ಪೆಂಡಿಂಗ್ ಇರುವ ಹೋಮ್ ಮಿನಿಸ್ಟರ್ ಸಿನಿಮಾ ಪೂರ್ಣಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ವಾಗುತ್ತಿದ್ದು, ಪೂರ್ಣ ನಾಯ್ಜು ಪ್ರೊಡಕ್ಷನ್ ಅಡಿಯಲ್ಲಿ ಸುಜಯ್ ಕೆ, ಶ್ರೀಹರಿ ನಿರ್ದೇಶಿಸುತ್ತಿದ್ದಾರೆ, ವೇದಿಕಾ ಉಪೇಂದ್ರಗೆ ನಾಯಕಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ತಾನ್ಯ ಹೊಪೆ ನಾಯಕಿಯಾಗಿದ್ದಾರೆ,

ಕೆ.ಮಾದೇಶ್ ಅವರ ಉಪ್ಪಿ-ರುಪ್ಪಿ ಸಿನಿಮಾ ಕೂಡ ಅರ್ಧಕ್ಕೆ ನಿಂತಿದ್ದು ಆ ಸಿನಿಮಾವನ್ನು ಪೂರ್ಣಗೊಳಿಸಲಿದ್ದಾರೆ, ರಚಿತಾರಾಮ್ ನಟಿಸಿದ್ದಾರೆ.ಮತ್ತೆ ಸಿನಿಮಾಗೆ ವಾಪಸಾದ ಉಪೇಂದ್ರ ಬಳಿ ಹಲವು ನಿರ್ದೇಶಕರು ಕಥೆಗಳನ್ನು ಬರೆದು ತಂದಿದ್ದಾರೆ, ಉಪೇಂದ್ರಗಾಗಿ ಕಥೆ ತಂದಿರುವ ನಿರ್ದೇಶಕ ಗುರುದತ್ ಇನ್ನೂ ಮುಂದೆ ಪೂರ್ಣ ಸಮಯದಲ್ಲಿ ಉಪ್ಪಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದು ಆಸಕ್ತಿದಾಯಕ ವಿಷಯವೇನೇಂದರೆ ಉಪೇಂದ್ರ ಹೊಸ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ, ಮುಂದಿನ ಆರು ತಿಂಗಳಲ್ಲಿ ಉಪೇಂದ್ರ ಟೀಮ್ ಇದಕ್ಕಾಗಿ ಕೆಲಸ ಮಾಡಲಿದೆ, ಅದ್ಧೂರಿಯಾಗಿ ನಿರ್ಮಾಣ ಮಾಡುವ ಉದ್ದೇಶಹೊಂದಿರುವ ಈ ಸಿನಿಮಾ ಉಪೇಂದ್ರ ಹುಟ್ಟುಹಬ್ಬದಂದು ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Next Story

RELATED STORIES