Top

ದಶಕದ ನಂತರ ಭಾರತ್ ಗಾಗಿ ಒಂದಾದ ಸಲ್ಮಾನ್ ಖಾನ್- ಪ್ರಿಯಾಂಕಾ ಚೋಪ್ರಾ

ದಶಕದ ನಂತರ ಭಾರತ್ ಗಾಗಿ ಒಂದಾದ ಸಲ್ಮಾನ್ ಖಾನ್- ಪ್ರಿಯಾಂಕಾ ಚೋಪ್ರಾ
X

ಮುಂಬಯಿ: ಅಂತರರಾಷ್ಟ್ರೀಯ ಮಟ್ಟದ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ 10 ವರ್ಷಗಳ ನಂತರ ಮತ್ತೆ ಸಲ್ಮಾನ್ ಖಾನ್ ಜೊತೆ ಅಭಿನಯಿಸುತ್ತಿದ್ದಾರೆ.

ಅಲಿ ಅಬ್ಬಾಸ್ ಜಫಾರ್ ನಿರ್ದೇಶನದ ಭಾರತ್ ಎಂಬ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕಾ ನಟಿಸುತ್ತಿದ್ದಾರೆ.

ಹಿಂದಿನ ಸಿನಿಮಾದಲ್ಲಿ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ, ಈಗ ಬರುತ್ತಿರುವ ಮತ್ತೊಂದು ಸಿನಿಮಾಗಾಗಿ ನಾನು ಮತ್ತಷ್ಟು ಉತ್ಸುಕತೆಯಿಂದ ಕಾಯುತ್ತಿರುವುದಾಗಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ಜಫರ್ ನಿರ್ದೇಶನದ ಗುಂಡೇ, ಮುಜ್ಶೇ ಶಾದಿ ಕರೋಗಿ ಮತ್ತು ಸಲಾಮ್ ಇ ಇಶ್ಕ್ ಸಿನಿಮಾಗಳಲ್ಲಿ ಸಲ್ಮಾನ್ ಜೊತೆ ಪ್ರಿಯಾಂಕಾ ನಟಿಸಿದ್ದರು,

ನಿರಂತರ ಬೆಂಬಲ ನೀಡುತ್ತಿರುವ ತಮ್ಮ ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಪ್ರಿಯಾಂಕಾ ಧನ್ಯವಾದ ಹೇಳಿದ್ದಾರೆ,ಜಾಗತಿ ಸಿನಿಮಾ ಜಗತ್ತಿಲ್ಲಿ ಪ್ರಿಯಾಂಕಾ ಮಿಂಚುತ್ತಿರುವುದು ಅವರ ಸಾಮರ್ಥ್ಯವನ್ನು ತೋರುತ್ತದೆ ಎಂದು ನಿರ್ದೇಶಕ ಜಫರ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ್ ಸಿನಿಮಾ ಇಂಡಿಯಾದ 70 ವರ್ಷಗಳ ಸಂಸ್ಕೃತಿ ವಿವಿಧ ದೇಶದಗಳಲ್ಲಿ ಹರಡಿರುವುದರ ಸಂಬಂಧಿತ ಕತೆಯಾಗಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಲಾವಿದೆ ಪ್ರಿಯಾಂಕಾ ಚೋಪ್ರಾ ಈ ಕಥೆಗೆ ಸೂಕ್ತ ಎಂದು ಜಫರ್ ಹೇಳಿದ್ದಾರೆ.

ಅತುಲ್ ಅಗ್ನಿ ಹೋತ್ರಿ ಜೊತೆ ನ್ಯೂಯಾರ್ಕ್ ಗೆ ತೆರಳಲಿರುವ ಜಫರ್ ಪ್ರಿಯಾಂಕಾ ಗೆ ಚಿತ್ರಕಥೆ ಬಗ್ಗೆ ವಿವರಣೆ ನೀಡಲಿದ್ದಾರೆ, ಭಾರತ್ ಸಿನಿಮಾದ ಆತ್ಮವೇ ಪ್ರಿಯಾಂಕಾ ಆಗಿದ್ದಾರೆ ಎಂದು ತಿಳಿಸಿದ್ದಾರೆ.

Next Story

RELATED STORIES