Top

ಇದು ನಮ್ಮ 'ಕರಾಳ ಸಮಯ': ಪ್ರಧಾನಿ

ನವದೆಹಲಿ: ಕಥುವಾ, ಉನ್ನಾವೊ ಅತ್ಯಾಚಾರ ಪ್ರಕರಣದ ನಂತರ 49 ವರ್ಷದ ಸರ್ಕಾರಿ ನಿವೃತ್ತ ಅಧಿಕಾರಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದು, ಭಯಾನಕ ವ್ಯವಹಾರಗಳ ಸ್ಥಿತಿ ಎಂದು ಆರೋಪಿಸಿದ್ದಾರೆ.8 ವರ್ಷದ ಬಾಲಕಿ ಮೇಲೆ ಅನಾಗರಿಕವಾಗಿ ಕ್ರೂರವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದನ್ನು ನೋಡಿದ್ದರೆ ಅಪ್ರಾಮಾಣಿಕತೆಯ ಆಳದಲ್ಲಿ ಮುಳುಗಿರುವುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ನಂತರ ಇದು ನಮ್ಮ ಕರಾಳ ಸಮಯವಾಗಿದ್ದು, ಸರ್ಕಾರದ ಹೊಣೆಯನ್ನು ಕಂಡುಹಿಡಿಯಬೇಕಾಗಿದೆ, ನಮ್ಮ ರಾಜಕೀಯ ಪಕ್ಷಗಳ ನಾಯಕರು ಅಸಮರ್ಪಕ ಹಾಗೂ ದುರ್ಬಲ ಮನಸ್ಥಿತಿ ಉಳ್ಳವರು ಆಗಿದ್ದಾರೆ. ಜೀವನದ ಅಂತ್ಯಭಾಗದಲ್ಲಿ ಬೆಳಕು ಕಾಣದಂತಾಗಿದ್ದು, ಅವಮಾನದಿಂದ ನೇಣಿಗೆ ಕೊರಳೊಡ್ಡಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.ನಾಗರಿಕರು ಎಂಬ ವಿಳಾಸದಲ್ಲಿ ಪತ್ರ ಬರೆದಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳು, ಮೋದಿಗೆ ದುಃಖ ಬರುವುದಿಲ್ಲ ಎಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವಾಗ, ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂದರ್ಭದಲ್ಲಿಯೇ ಎರಡು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇಂತಹ ಭಯಾನಕ ಸ್ಥಿತಿಯ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಲಿದ್ದಾರೆಯೇ ಎಂದು ಅವರು ಹೇಳಿದ್ದಾರೆ.ಜಮ್ಮು-ಕಾಶ್ಮೀರದ ಕುತುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಚಾರ್ಚ್ ಶೀಟ್ ನಲ್ಲಿ ಭಯಾನಕತೆಯ ಮಾಹಿತಿ ಬಹಿರಂಗವಾಗಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ.

Next Story

RELATED STORIES