Top

ಅನಂತ್ ಕುಮಾರ್ ಹೆಗಡೆ ಕಾರಿಗೆ ಡಿಕ್ಕಿ ಒಂದು ಆಕಸ್ಮಿಕ ಘಟನೆ: ಹಾವೇರಿ ಎಸ್ಪಿ

ಹಾವೇರಿ: ಹಾವೇರಿ ಜಿಲ್ಲೆ ರಾಣಿಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಸಚಿವರ ಬೆಂಗಾವಲು ಕಾರು ಅಪಘಾತವು ಒಂದು ಆಕಸ್ಮಿಕ ಘಟನೆ. ಇದರ ಹಿಂದೆ ಯಾವ ದುರುದ್ದೇಶವಿರಲಿಲ್ಲ. ಎಂದು ಹಾವೇರಿ ಪೋಲೀಸ್ ಇನ್ಸ್ ಪೆಕ್ಟರ್ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ.

ಹಾವೇರಿಯ ರಾಣಿಬೆನ್ನೂರು ತಾಲೂಕಿನ ಹಲಗೇರಿ ಸಮೀಪ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾರಿನಲ್ಲಿ ತೆರಳುತ್ತಿದ್ದಾಗ ಲಾರಿಯೊಂದು ವೇಗವಾಗಿ ಬಂದು ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಲಿ, ಯಾರಿಗೆ ಗಾಯಗಳಾಗಲಿ ಆಗಿರಲಿಲ್ಲ. ಆದರೆ ಸಚಿವ ಹೆಗಡೆ ಇದು ನನ್ನ ಮೇಲಿನ ಕೊಲೆ ಪ್ರಯತ್ನ ಎಂದು ಆರೋಪಿಸಿದ್ದರು.

ಸಚಿವರ ಆರೋಪದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಹಾವೇರಿ ಎಸ್ಪಿ ಕೆ. ಪರಶುರಾಮ್ ಇದು ಆಕಸ್ಮಿಕ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ.

"ಲಾರಿ ಚಾಲಕ ನಾಸೀರ ಅಹ್ಮದ್ ಮಾಫೀಜ್ ಚಿಕ್ಕಮಗಳೂರಿನ ನ್ ಆರ್ ಪುರ ತಾಲೂಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿಯಾಗಿದ್ದು ಭಾನುವಾರ ತನ್ನ ಊರಿನಿಂದ ದಬ್ಬರ್ ವುಡ್ ತುಂಬಿಸಿಕೊಂಡು ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಗೆ ತೆರಳಿದ್ದಾನೆ.ಅಲ್ಲಿ ಅನ್ ಲೋಡ್ ಆದ ಲಾರಿಯಲ್ಲಿ ಕಿರಾಣಿ ವಸ್ತುಗಳನ್ನು ತುಂಬಿ ಶಿವಮೊಗ್ಗಕ್ಕೆ ಹೊರಟಿದ್ದ. ಇಷ್ಟರಲ್ಲಿ ಆತನ ಸಂಬಂಧಿಯೊಬ್ಬ ಕರೆ ಮಾಡಿದ್ದ ಹಾಗಾಗಿ ಚಾಲಕ ಹಲಗೇರಿ ಬೈಪಾಸ್ ನಲ್ಲಿ ತೆರಳದೆ ಓವರ್ ಬ್ರಿಡ್ಜ್ ಬಳಿ ಬಂದಿದ್ದನು. ದಾರಿ ತಪ್ಪಿದ್ದು ತಿಳಿಯುತ್ತಾ ಚಾಲಕ ಮತ್ತೆ ಯು ಟರ್ನ್ ತೆಗೆದುಕೊಳ್ಳಲು ನೋಡಿದ್ದಾನೆ. ಆಗ ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದೆ."

ಇದೀಗ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.ಈ ಅಪಘಾತ ಉದ್ದೇಶಪೂರ್ವಕವಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳ್ಲಿದಿದೆ ಎಂದು ಪೋಲೀಸರು ಹೇಳಿದ್ದಾರೆ.

Next Story

RELATED STORIES